ಜಿóಗ್ಗುರ್ಯಾಟ್ -
	ಕ್ರಿ.ಪೂ. 2,200ರಿಂದ 500ರ ವರೆಗಿನ ಕಾಲದಲ್ಲಿ ಮೆಸೊಪೊಟೇಮಿಯದ ಮುಖ್ಯ ನಗರಗಳಲ್ಲಿ ಸಾಮಾನ್ಯವಾಗಿ ನಿರ್ಮಿಸಲಾಗುತ್ತಿದ್ದ ಪಿರಮಿಡಿನಂಥ ಸೋಪಾನಯುಕ್ತ ದೇವಮಂದಿರ. ಸುಮಾರು 25 ಜಿóಗ್ಗುರ್ಯಾಟ್‍ಗಳು ಇದ್ದದ್ದು ಗೊತ್ತಿದೆ. ಇವು ಸುಮಾರ್, ಬ್ಯಾಬಿಲೋನಿಯ, ಅಸಿರಿಯಗಳಲ್ಲಿ ಸುಮಾರು ಸಮಸಮನಾಗಿ ಹಂಚಿಕೆಯಾಗಿವೆ. ಜಿóಗ್ಗುರ್ಯಾಟ್‍ಗಳು ಮೆಸೊಪೊಟೇಮಿಯದ ಪ್ರಾಚೀನ ಶಕ್ತಿಕೇಂದ್ರಗಳು. ಜಿóಗ್ಗುರ್ಯಾಟ್‍ಗಳನ್ನು ಸರಾಸರಿಯಲ್ಲಿ 170' (52 ಮೀ) ಚಚ್ಚೌಕವಾಗಿಯೋ, 125' ( 170' (38 ಮೀ. ( 52 ಮೀ) ಆಯತಾಕಾರದಲ್ಲೋ ಅನೇಕ ಹಂತಗಳಲ್ಲಿ ಕಟ್ಟಲಾಗುತ್ತಿತ್ತು. ನಡುವೆ ಹಸಿ ಇಟ್ಟಿಗೆಗಳಿಂದಲೂ ಹೊರಭಾಗದಲ್ಲಿ ಸುಟ್ಟ ಇಟ್ಟಿಗೆಗಳಿಂದಲೂ ಇವನ್ನು ಕಟ್ಟಲಾಗುತ್ತಿತ್ತು. ಉನ್ನತವಾಗಿಯೂ ಕಡಿದಾಗಿಯೂ ಇದ್ದ ಇವುಗಳ ಮೇಲೇರಲು ಹೊರಗಡೆಯಲ್ಲಿ ಮೂರು ಸೋಪಾನ ಪಂಕ್ತಿಗಳಿದ್ದುವು. ಮೇಲೇರಿದಂತೆ ಹಂತಗಳು ಕಿರಿದಾಗಿದ್ದುವು. ಆದರೆ ಗುರುತಿಸಲಾಗಿರುವ ಜಿóಗ್ಗುರ್ಯಾಟ್‍ಗಳಲ್ಲಿ ಅರ್ಧಕ್ಕೆ ಮೆಟ್ಟಿಲುಗಳ ಗುರುತು ಸಿಕ್ಕಿಲ್ಲ. ದುರದೃಷ್ಟವಶಾತ್ ಯಾವ ಜಿûಗ್ಗುರ್ಯಾಟೂ ಅದರ ಮೊದಲಿನ ಎತ್ತರದಲ್ಲಿ ಉಳಿದಿಲ್ಲ. ಇರುವವುಗಳ ಪೈಕಿ ಅತ್ಯಂತ ಚೆನ್ನಾಗಿ ರಕ್ಷಿಸಲಾಗಿರುವ ಜಿûಗ್ಗುರ್ಯಾಟ್ ಎಂದರೆ ಅರ್‍ನಲ್ಲಿರುವಚಿಥದು. ಎಲಾಮಿನ ಚೋಗಾ ಚಾಂಬಿಲ್‍ನಲ್ಲಿರುವ ಜಿûಗ್ಗುರ್ಯಾಟ್ ಅತ್ಯಂತ ದೊಡ್ಡದು. ಇದು 335' (102ಮೀ.) ಚೌಕನಾಗಿದೆ. ಇದರ ಎತ್ತರ 80'. ಬ್ಯಾಬಿಲಾನಿನ ಬ್ಯಾಬೆಲ್ ಗೋಪುರ ಅತ್ಯಂತ ಪ್ರಸಿದ್ಧ. ಇದರಲ್ಲಿ ಏಳು ಹಂತಗಳಿದ್ದುವು. ಇದರ ತುದಿಯ ದೇಗುಲದಲ್ಲಿದ್ದದ್ದು ದೇವರ ವಿಗ್ರಹವಲ್ಲ; ಅಲ್ಲಿದ್ದುದು ಒಂದು ಆರಾಮಾಸನ ಮತ್ತು ಚಿನ್ನದ ಮೇಜು-ಎಂಬುದಾಗಿ ಕ್ರಿ.ಪೂ. 5ನೆಯ ಶತಮಾನದ ಗ್ರೀಕ್ ಇತಿಹಾಸಕಾರ ಹಿರಾಡೊಟಸ್ ಹೇಳಿದ್ದಾನೆ. ಪವಿತ್ರ ಪರ್ವತಾಗ್ರದ ಈ ಪವಿತ್ರ ಭವನಕ್ಕೆ ದೇವರೇ ಸ್ವತಃ ಬರುತ್ತಿದ್ದನೆಂದು ಜನ ಭಾವಿಸಿದ್ದುದೇ ಇದಕ್ಕೆ ಕಾರಣವೆಂಬುದು ಅವನ ಹೇಳಿಕೆ.								(ಎಂ.ಎಸ್.ಕೆ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ